Back
Dharwad580020blurImage

ಶ್ರೀವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

Kallappa Mandyal, Hubballi
Sept 02, 2024 11:38:30
Hubballi, Karnataka

ಧಾರವಾಡ ಜಿಲ್ಲೆಯ ಶ್ರೀಕ್ಷೇತ್ರ ಹಾರೋಬೆಳವಡಿಯಲ್ಲಿ ಶ್ರಾವಣ ಸೋಮವಾರದಂದು ಜಾಗೃತ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾಪೂಜೆ ಮತ್ತು ಜಾತ್ರಾ ಮಹೋತ್ಸವ ಅದ್ಭುತವಾಗಿ ಆಚರಿಸಲಾಯಿತು. ಜಿಲ್ಲೆಯ ಪೂಜ್ಯ ಶ್ರೀ ಬೂದಿ ಮಹಾಸ್ವಾಮಿಗಳ, ನವಲಗುಂಡದ ಪೂಜ್ಯ ನಾಗಲಿಂಗ ಸ್ವಾಮಿಗಳ ಮತ್ತು ಗರಗದ ಮಡಿವಾಳಜ್ಜ ಸ್ವಾಮಿಗಳ ಆಶೀರ್ವಾದ ಮತ್ತು ಸಲಹೆ ಮೇರೆಗೆ ಪೂಜೆಯನ್ನು ಬೆಳಿಗ್ಗೆ 6:00 ಕ್ಕೆ ನಡೆಸಲಾಯಿತು. ಪೂಜೆಯ ಸಂದರ್ಭದಲ್ಲಿ ಪ.ನಿ.ಪ್ರ. ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಮತ್ತು ಪ.ನಿ.ಪ್ರ. ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಪಾಲ್ಗೊಂಡರು. ಗ್ರಾಮದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಮತ್ತು ಮಕ್ಕಳ ಭಾಗವಹಿಸಿದರು.

1
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com