Back
Dharwad580030blurImage

ಸೊನಾಲಿಮ್, ದೂಧಸಾಗರ ನಡುವೆ ರೈಲು ಹಳಿ ದುರಸ್ತಿ ಪೂರ್ಣ

Kallappa Mandyal, Hubballi
Aug 15, 2024 16:48:04
Hubballi, Karnataka
.ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ ಸೊನಾಲಿಮ್ ಮತ್ತು ದೂಧಸಾಗರ ನಿಲ್ದಾಣಗಳ ಮಧ್ಯದ ಬ್ರಗಾಂಜಾ ಘಾಟ್‌ನಲ್ಲಿ ಹಳಿ ದುರಸ್ತಿಗೊಂಡ ನಂತರ ಮೊದಲ ಪ್ರಯಾಣಿಕರ ರೈಲು ಸಂಚರಿಸಿತು. ಈ ಘಾಟ್‌ನಲ್ಲಿ ಗೂಡ್ಸ್ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದರಿಂದ ರೈಲುಗಳ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸೋಮವಾರ ಎಲ್ಲ ಬೋಗಿಗಳನ್ನು ಮರಳಿ ಹಳಿಗೆ ತಂದ ನಂತರ ಗೂಡ್ಸ್ ರೈಲು ಸಂಚಾರ ಪ್ರಾರಂಭಿಸಲಾಗಿತ್ತು. ಇದೀಗ ವಾಸ್ಕೊ-ಹಜರತ್ ನಿಜಾಮುದ್ದಿನ್ ಗೋವಾ ಎಕ್ಸ್‌ಪ್ರೆಸ್ ರೈಲು ಈ ರೈಲು ಹಳಿ ಮೇಲೆ ಸಂಚರಿಸಿದ್ದು, ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಮೊದಲಿನಂತೆ ಮುಂದುವರೆಯಲಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com