ಹುಬ್ಬಳ್ಳಿಯ ಮುಕ್ಕಲ್ ಶಾಲೆಗೆ ಹೊಸ ಎಸ್ ಡಿಎಂಸಿ ಅಧ್ಯಕ್ಷ
ಹುಬ್ಬಳ್ಳಿ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪ ಕಾರಿ ಆಯ್ಕೆಯಾಗಿದ್ದಾರೆ. ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಸಭೆಯಲ್ಲಿ ಗದಿಗೆಪ್ಪ ಕಡ್ಡಿ, ಅರುಣೋದಯ ಗುರುಪಾದಗೌಡ್ರ, ಬಸವರಾಜ್ ಗಂಜಿ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
For breaking news and live news updates, like us on Facebook or follow us on Twitter and YouTube . Read more on Latest News on Pinewz.com
ಎರಡು ಸಾವಿರ ರೂಪಾಯಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನ ಹೊಟ್ಟೆಗೆ ಕತ್ತರಿ ತಾಗಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಕುಂಚನೂರ್ ಕಾಂಪ್ಲೆಕ್ಸ್ ಬಳಿ ಜರುಗಿದೆ.ಗಾಯಗೊಂಡ ವ್ಯಕ್ತಿಯನ್ನ ಶ್ರೀಧರ ಟರ್ಕಿ(39) ಎಂದು ಗುರ್ತಿಸಲಾಗಿದೆ. ಗಾಯಾಳುವನ್ನ ಜಮಖಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ವೃತ್ತಿಯಲ್ಲಿ ಟೇಲರ್ ಆಗಿರುವ ಕುಮಾರ ಬಕ್ರೆ ಅವರು ಹೊಟ್ಟೆಗೆ ಕತ್ತರಿ ತಾಗಿಸಿದ್ದಾರೆ ಎಂದು ತಿಳಿದುಬಂದಿದೆ.ಬಾಕಿ ಹಣದ ವಿಚಾರವಾಗಿ ವಾಗ್ವಾದ ನಡೆದು ಕತ್ತರಿ ಇತಿತವಾಗಿದೆ.ಕುಮಾರ್ ಎನ್ನುವ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ