Back
Dharwad580020blurImage

ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ರಿಷಿತ್‌ಗೆ 4 ಚಿನ್ನದ ಪದಕ

Kallappa Mandyal, Hubballi
Aug 10, 2024 14:34:46
Hubballi, Karnataka

ಧಾರವಾಡ ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎನ್.ಕೆ. ಠಕ್ಕರ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಿಷಿತ್ ದೇಸಾಯಿ 4 ಚಿನ್ನದ ಪದಕಗಳನ್ನು ಗೆದ್ದಿದ್ದಾನೆ. 17 ವರ್ಷ ವಯೋಮಿತಿ ವಿಭಾಗದಲ್ಲಿ 100 ಮೀ. ಫ್ರೀ ಸ್ಟೈಲ್, 100 ಮೀ. ಬ್ರೆಸ್ಟ್‌ಸ್ಟ್ರೋಕ್, 800 ಮೀ. ಫ್ರೀ ಸ್ಟೈಲ್ ಹಾಗೂ 4x100 ಮೀ. ಫ್ರೀ ಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದಾನೆ. ಶಿವಗಿರಿ ಈಜುಗೊಳದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ರಿಷಿತ್‌ನನ್ನು ಅಭಿನಂದಿಸಿದ್ದಾರೆ.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com