icon-pinewzicon-zee
PINEWZ
become creator
Become a News Creator

Your local stories, Your voice

Follow us on
Download App fromplay-storeapp-store
Advertisement
Back

हमें फेसबुक पर लाइक करें, ट्विटर पर फॉलो और यूट्यूब पर सब्सक्राइब्ड करें ताकि आप ताजा खबरें और लाइव अपडेट्स प्राप्त कर सकें| और यदि आप विस्तार से पढ़ना चाहते हैं तो https://pinewz.com/hindi से जुड़े और पाए अपने इलाके की हर छोटी सी छोटी खबर|

Advertisement

MSILನಲ್ಲಿ ಹೆಚ್ಚಿನ ದರಕ್ಕೆ ಲೀಕರ್ ಮಾರಾಟ.! ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಚಡಿ ಕ್ರಾ ಗ್ರಾಮದಲ್ಲಿ ಈ ಘಟನೆ

BKBelagavi KAFollow5 Aug 2025, 11:00 am
SC Colony, Karnataka:MSILನಲ್ಲಿ ಹೆಚ್ಚಿನ ದರಕ್ಕೆ ಲೀಕರ್ ಮಾರಾಟ.! ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಚಡಿ ಕ್ರಾ ಗ್ರಾಮದಲ್ಲಿ ಈ ಘಟನೆ. ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕೊಡುತಿದ್ದಾರಾ ಎನ್ನುವ ಪ್ರಶ್ನೆ. ಅಧಿಕಾರಿಗಳಿಗೆ ಗೊತ್ತಿದ್ರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಕೇಳುತ್ತಿರುವ ಅಬಕಾರಿ ಇಲಾಖೆ. ಒಂದು ಬಾಟಲಿಗೆ 10ರೂ ಹೆಚ್ಚಳ ಮಾಡಿ ಮಧ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಎಂ ಆರ್ ಪಿ ದರಕ್ಕಿಂತ ಹೆಚ್ಚು ಲಾಭವನ್ನು ಇಟ್ಟು ಮಧ್ಯಪ್ರಿಯರನ್ನು ದಿಕ್ಕು ತಪಸುತ್ತಿರುವ msil ಬೆಳಗಾವಿ ಜಿಲ್ಲೆ ಅಬಕಾರಿ ಇಲಾಖೆ ಅಧಿಕಾರಿಗಳೇ ಈ ಈ ಸ್ಟೋರಿ ನೋಡಲೇಬೇಕು
0
0
Report
Advertisement

ರಾಜ್ಯದಲ್ಲೂ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ:ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ವಿಶ್ವಾಸ

SomashekharSomashekharFollow15 Jun 2025, 03:19 pm
Bagalkote, Karnataka:ಬರುವ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್. ಎಸ್. ಮಂಜುನಾಥ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ, ಉಮ್ಮಸ್ಸು ಕಂಡುಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಯುವ ಕಾಂಗ್ರೆಸ್ ಮುಂದಾಗಬೇಕು. ಮುಂದಿನ ಚುನಾವಣೆಗೂ ಸಜ್ಜಾಗಬೇಕು ಎಂದರು. ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯಂತೆ ಈಗಿನಿಂದಲೇ ಸಂಘಟನೆ ಸದೃಢಗೊಳಿಸಿ 2028ರ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ ಎಂದ ಅವರು, “ಜಮಖಂಡಿಯಲ್ಲಿ ನಮಗೆ ನೀಡಿದ ಅದ್ಭುತ ಸ್ವಾಗತದಿಂದ ಈ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಎಂಬುದು ಸಾಬೀತಾಗಿದೆ” ಎಂದು ಹೇಳಿದರು.
0
0
Report
Advertisement

ಬಾಗಲಕೋಟೆ ನಗರದಲ್ಲಿ ಯಶಸ್ವಿಯಾಗಿ ಜರುಗಿದ ಯುವ ಕಾಂಗ್ರೆಸ್ ಜಿಲ್ಲಾ ಸಮೀತಿಯ ಕಾರ್ಯಕಾರಿಣಿ ಸಭೆ

SomashekharSomashekharFollow15 Jun 2025, 03:16 pm
Bagalkote, Karnataka:ಬಾಗಲಕೋಟೆ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಬಾಗಲಕೋಟ ವತಿಯಿಂದ ಬಾಗಲಕೋಟೆ ನಗರದ ಖಾಸಗಿ ರೆಸಾರ್ಟ್ ನಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್ಎಸ್ ಮಂಜುನಾಥಗೌಡ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ ಜಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ್ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾದ ಅಬ್ದುಲ್ ದೇಸಾಯಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ , ಉಪಾಧ್ಯಕ್ಷರಾದ ಮಂಜುನಾಥ್ ಮುಚಖಂಡಿ, ಬಾಗಲಕೋಟೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ, ಜಿಲ್ಲಾ ಎಸ್ ಸಿ ಬ್ಲಾಕ್ ಅಧ್ಯಕ್ಷ ರಾಜು ಮನ್ನಿಕೆರಿ ರವರು, ಸೇರಿ ಎಲ್ಲಾ ಜಿಲ್ಲಾ, ತಾಲೂಕ, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕಾರಿಣಿ ಸಭೆ ಯಶಸ್ವಿಗೊಳಿಸಿದರು.
0
0
Report
Advertisement

ಕಲಾದಗಿ ಗ್ರಾಮದಲ್ಲಿ ವಿವಿಧ ಹಿಂದೂಪರ ಸಂಘಟನೆಗಳಿಂದ ಆಕ್ರೋಶದ ಪ್ರತಿಭಟನೆ

SomashekharSomashekharFollow13 Jun 2025, 09:38 am
Bagalkote, Karnataka:ಬಾಲಾಜಿ‌ ಮಂದಿರದ ಮುಂದೆ ಹಸುವಿನ ತಲೆ ಹಾಗೂ ಇನ್ನಿತರ ದೇಹದ ಅವಶೇಷಗಳನ್ನು ಇಟ್ಟಿದ್ದನ್ನ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಹಿಂದೂಪರ ಸಂಘಟನೆಗಳ‌ ನೇತೃತ್ವದಲ್ಲಿ ಸಕಲ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.ಕಲಾದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು‌.ಕಳೆದ ಕೆಲವು ದಿನಗಳ ಹಿಂದೆ ಕಲಾದಗಿ ಗ್ರಾಮದ ಬಾಲಾಜಿ ಮಂದಿರದಲ್ಲಿ ದುಷ್ಕರ್ಮಿಗಳು ಹಸುವಿನ ತಲೆ ಹಾಗೂ ಇನ್ನಿತರೇ ದೇಹದ ಅವಶೇಷಗಳನ್ನು ಇಟ್ಟಿ ಹೋಗಿದ್ದರು.ಈ ಹಿನ್ನೆಲೆ ಗ್ರಾಮದಲ್ಲಿ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಮುಖಂಡರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಡಿವೈಎಸ್ಪಿ ಗಜಾನನ ಅವರ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
0
0
Report

ಹಿರೇಮಾಗಿ ಗ್ರಾಮದಲ್ಲಿ ಜಮೀನುಗಳಿಗೆ ನುಗ್ಗಿದ ಮಲಪ್ರಭ ನದಿ ನೀರು, ರೈತರು ಕಂಗಾಲು

SomashekharSomashekharFollow13 Jun 2025, 09:34 am
Bagalkote, Karnataka:ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.ಅಪಾರ ಪ್ರಮಾಣದ ಕಬ್ಬು ಬೆಳೆ ಸೇರಿದಂತೆ ಇತರೇ ಬೆಳೆಗಳು ಜಲಾವೃತಗೊಂಡಿವೆ. ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮವಾಗಿ ಹಿರೇಮಾಗಿ ಗ್ರಾಮದಲ್ಲಿ ಮಲಪ್ರಭ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಹಾಗೂ ಹಿರೇಮಾಗಿ ಮತ್ತು ಮಾದಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಠಿಯಾಗಿದೆ.
0
0
Report
Advertisement
Advertisement
Back to top