ಕಳ್ಳರು ಕೈ ಚಳಕ ತೋರಿ ಸರಣಿ ಮನೆಗಳಿಗೆ ಕನ್ನ ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದ್ದು ಬುಧವಾರ ಬೆಳಗ್ಗೆ ತಿಳಿದುಬಂದಿದೆ. ತೆರಕಣಾಂಬಿ ಗ್ರಾಮದ ಕುಮಾರ್, ರವಿ, ರೇಷ್ಮಾ, ನಾಗರಾಜ್ ಹಾಗೂ ಪುಟ್ಟದೇವಮ್ಮ ಎಂಬವರ ಮನೆಗಳ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.ಮನೆಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳತನ ಮಾಡಿದ್ದು ಕುಮಾರ್ ಎಂಬವರ ಮನೆಯಲ್ಲಿ ಒಂದೂವರೆ ಲಕ್ಷ ನಗದು, ಹತ್ತು ಗ್ರಾಂ ಚಿನ್ನ ಕಳುವು ಮಾಡಿದ್ದು ಉಳಿದ ಮನೆಗಳಲ್ಲಿ ಕಳವಾದ ವಸ್ತುಗಳ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.