ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಸಮೀಪ ಮಂಗಳವಾರ ಸಂಜೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ಏಕಾಏಕಿ ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಕಬ್ಬಿನ ಲಾರಿ ಅಡ್ಡಗಟ್ಟಿದೆ. ಆನೆ ಕಂಡು ಹೌಹಾರಿರುದ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ ಆನೆ ಪಕ್ಕಕ್ಕೆ ಸರಿಯುವ ತನಕ ಕಾದಿದ್ದು ಅರ್ಧ ತಾಸಿಗಿಂತಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ.
ಕಾಡಾನೆ ರಸ್ತೆಯ ಮೇಲೆ, ವಾಹನ ಸವಾರರು ಪರದಾಡಿದ ದೃಶ್ಯ ವೈರಲ್
For breaking news and live news updates, like us on Facebook or follow us on Twitter and YouTube . Read more on Latest News on Pinewz.com
ಚಾಮರಾಜನಗರದ ತಾಲ್ಲೂಕು ನಾಯಕರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶ್ರೀನಿವಾಸನಾಯಕ ಅವರು ಮಾತನಾಡುತ್ತಾ, 10 ವರ್ಷಗಳಿಂದ ವಾಲ್ಮೀಕಿ ಪುತ್ಥಳಿ ನಿರ್ಮಾಣದ ಬೇಡಿಕೆಯಿರುವ ನಾಯಕ ಸಮುದಾಯದ ಪರವಾಗಿ, ಜಿಲ್ಲಾಡಳಿತವು ಅಕ್ಟೋಬರ್ 17ರಂದು ವಾಲ್ಮೀಕಿ ಜಯಂತಿಯಂದು ಶಂಕುಸ್ಥಾಪನೆ ಮಾಡದಿದ್ದರೆ, ಸಮುದಾಯವೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಎಚ್ಚರಿಕೆ ನೀಡಿದರು. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಶಂಕುಸ್ಥಾಪನೆ ಮಾಡದಿದ್ದರೆ, ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು.
ರಾಮನ ಅವತಾರ ಗಣಪತಿ ವಿಸರ್ಜನೆ ಹಿನ್ನೆಲೆ ಅದ್ದೂರಿ ಮೆರವಣಿಗೆ, ಕಣ್ಮನ ಸೆಳೆದ ಕಲಾತಂಡಗಳು ಶುಕ್ರವಾರ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿಯ ರಾಮನ ಅವತಾರದ ಗಣಪತಿ ವಿಸರ್ಜನೆ ಅಂಗವಾಗಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ನಂದಿ ಧ್ವಜ, ಗೊರವರ ಕುಣಿತ, ಯುವಕ ಕುಣಿತ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು ಕಣ್ಮನ ಸೆಳೆದವು.
ನಗರದಲ್ಲಿ ಗಣಪತಿ ಮೂರ್ತಿ ವಿಸರ್ಜನೆಯ ಪ್ರಯುಕ್ತ ಮಾರ್ಗಗಳನ್ನು ಪರಿಶೀಲಿಸಲು ಪೌರಾಯುಕ್ತ ರಾಮದಾಸ್ ಅವರು ಭೇಟಿ ನೀಡಿದರು. ನಾಳೆ ಚಾಮರಾಜನಗರ ರಥದ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿಯ ವಿಸರ್ಜನೆ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ರಾಮದಾಸ್ ಅವರು ನಾಗರಿಕ ತಾಣಗಳನ್ನು ವಿಮರ್ಶಿಸಿದರು, ಇದರಲ್ಲಿ ಮೇಗಲ ನಾಯಕ ಬಡಾವಣೆ, ಅಂಬೇಡ್ಕರ್ ಬಡಾವಣೆ, ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಳ್ಳಿ ವೃತ್ತ ಸೇರಿದಂತೆ ವಿವಿಧ ಸ್ಥಳಗಳು ಒಳಗೊಂಡಿದ್ದವು.
ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಪೊಲೀಸರಿಂದ ಪಥಸಂಚಲನ ಅ.4 ರಂದು ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಮೆರವಣಿಗೆ ಸಾಗುವ ಸ್ಥಳಕ್ಕೆ ಬುಧವಾರ ಸಂಜೆ 4.30 ರಲ್ಲಿ ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಹೊರಟ ಪಥಸಂಚಲನ ಅಂಬೇಡ್ಕರ್ ಬಡಾವಣೆ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ದೊಡ್ದ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಳ್ಳಿ ವೃತ್ತ ಹಾಗೂ ವಿವಿಧ ಬಡಾವಣೆಯ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು.
ನಗರದ ಗಾಂಧಿ ಭವನದಲ್ಲಿ ಗಾಂಧೀಜಿಯವರ 155ನೇ ಜಯಂತಿ ಆಚರಣೆ ಬುಧವಾರ ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಚಾಮರಾಜನಗರದ ಹೊರ ವಲಯದ ಯಡಬೆಟ್ಟದ ಬಳಿ ಇರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗಾಂಧೀಜಿಯವರ ಭಾವಚಿತ್ರಕ್ಕೆ ಹಾಗೂ ಪುತ್ಥಳಿಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಪುಷ್ಪರ್ಚಾನೆ ಮಾಡಿದರು.