Back
Chamarajanagar571117blurImage

ಬಿ ಆರ್ ಟಿ ಅರಣ್ಯದಲ್ಲಿ ಗಂಡು ಆನೆ ಕಳೆಬರಹ ಪತ್ತೆ.

Chn
Aug 31, 2024 16:30:11
B.R.Hills, Karnataka

27-08-2024 ರಂದು, ಚಾಮರಾಜನಗರದ ಯಳಂದೂರು ವನ್ಯಜೀವಿ ವಲಯದ ಬೇತಾಳಕಟ್ಟೆಗಸಿನಲ್ಲಿ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗಳು ಆಳಶೆಟ್ಟಿಕಟ್ಟೆ ಮೂಲೆ ಎಂಬ ಅರಣ್ಯ ಪ್ರದೇಶದಲ್ಲಿ 40 ವರ್ಷದ ಗಂಡಾನೆಯ ಮೃತದೇಹವನ್ನು ಪತ್ತೆಹಚ್ಚಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಟಿ. ಹಿರೇಲಾಲ್ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಶ್ರೀಪತಿ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದರು. ಗಂಡಾನೆಯು 15 ರಿಂದ 20 ದಿನಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿರುವಂತೆ ಕಾಣುತ್ತಿದೆ. ದಂತಗಳು ಸುರಕ್ಷಿತವಾಗಿವೆ.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com