ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯ ಭಾವೋದ್ರಿಕ್ತ ಕ್ಷಣಗಳು!
Chamarajanagar, Karnataka:ಚಾಮರಾಜನಗರದಲ್ಲಿ ಸೋಮವಾರ ಬೆಳಿಗ್ಗೆ 9.30 ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯು ನಡೆಯಿತು. ಈ ಸಂದರ್ಭದಲ್ಲಿ ಸತ್ರ ನ್ಯಾಯಾಧೀಶರಾದ ಕೃಷ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್, ಸಿಇಒ ಮೋನಾ ರೋತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಶ್ರೀಪತಿ, ಅರಣ್ಯಾಧಿಕಾರಿ ಡಾ.ಜಿ. ಸಂತೋಷ್ ಸೇರಿದಂತೆ ಇತರೆ ಗಣ್ಯರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ನ್ಯಾಯಾಧೀಶರಾದ ಕೃಷ್ಣ ಸಮಾಜದ ಒಳಿತಿಗಾಗಿ ತಮ್ಮ ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಚಾಮರಾಜನಗರ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದ ಯುವ ದಸರಾ, ನಕ್ಕು ನಗಿಸಿದ ಮಿಮಿಕ್ರಿ ಗೋಪಿ
Chamarajanagar, Karnataka:ಚಾಮರಾಜನಗರ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದ ಯುವ ದಸರಾ, ನಕ್ಕು ನಗಿಸಿದ ಮಿಮಿಕ್ರಿ ಗೋಪಿ ಮಂಗಳವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ ಎರಡನೇ ದಿನದಲ್ಲಿ ಅದ್ದೂರಿಯಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಮಿಮಿಕ್ರಿ ಗೋಪಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಾ.ರಾಜ್ ಕುಮಾರ್ ಶಂಕರ್ ನಾಗ್, ಅಂಬರೀಶ್, ಹಾಗೂ ವಾಟಲ್ ನಾಗರಾಜ್ ಅವರ ಧ್ವನಿಯಲ್ಲಿ ಮಾತನಾಡಿ ಪ್ರೇಕ್ಷಕರನ್ನು ರಂಜಿಸಿದರು.
ದಸರಾ ಮಹೋತ್ಸವ: ಗೀತಾ ಹುಡೇದಾ ಅವರಿಂದ ಮ್ಯಾರಥಾನ್ ಗೆ ಚಾಲನೆ!
Chamarajanagar, Karnataka:ದಸರಾ ಮಹೋತ್ಸವ ಹಿನ್ನೆಲೆ ನಗರದಲ್ಲಿ ಮ್ಯಾರಥಾನ್ ಗೆ ಚಾಲನೆ ನೀಡಿದ ಎಡಿಸಿ ಗೀತಾ ಹುಡೇದಾ ಮಂಗಳವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಚಾಮರಾಜನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಚೆಲುವ ಚಾಮರಾಜನಗರ ಜಿಲ್ಲಾ ದಸರಾ ಅಂಗವಾಗಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬೆಳೆಸಬೇಕಾಗಿದೆ. ಬಲ ಪಡಿಸುವ ಆಟೋಟಗಳಲ್ಲಿ ನಾವು ಹೆಚ್ಚು ಭಾಗವಹಿಸಬೇಕಿದೆ ಎಂದು ತಿಳಿಸಿದರು.ಚಾಮರಾಜನಗರದ ೪೦ ವರ್ಷದ ಬಳಿಕ ಖಾಸಗಿ ದರ್ಬಾರ್: ದೇವರಿಗೆ ವಿಶೇಷ ಪೂಜೆ!
Chamarajanagar, Karnataka:ಚಾಮರಾಜನಗರದ ದಸರಾ ಮಹೋತ್ಸವದ ಅಂಗವಾಗಿ ೪೦ ವರ್ಷಗಳ ಬಳಿಕ ಚಾಮರಾಜೇಶ್ವರಸ್ವಾಮಿ ಖಾಸಗಿ ದರ್ಬಾರ್ ಏರ್ಪಡಿಸಲಾಯಿತು. ಈ ವೇಳೆ ಕೆಂಪನಂಜಾಂಬ ಸಮೇತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಜನನ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಮತ ಬಾಲಸುಬ್ರಹ್ಮಣ್ಯಂ, ಮತ್ತು ಇತರ ಗಣ್ಯರು ಭಾಗವಹಿಸಿದರು. ಸ್ವಾಮಿಗೆ ಬಹುಪರಾಕ್ ಹೇಳಲಾಗಿದ್ದು, ಈ ಪುಜಾ ಕೈಂಕರ್ಯಗಳು ಭಕ್ತಿ ಮತ್ತು ಶ್ರದ್ಧೆಯೊಂದಿಗೆ ನಡೆಯವುದು ಎಂದು ಪ್ರಕಟಿತವಾಗಿದೆ.
