Back
Chamarajanagar571313blurImage

ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ವಿರೋಧಿಸಿ ನಗರದಲ್ಲಿ ಸಹಿ ಸಂಗ್ರಹ ಚಳುವಳಿಗೆ ಚಾಲನೆ

Manjukumar
Aug 24, 2024 11:39:43
Chamarajanagar, Karnataka

ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವಾಣಿಜ್ಯೀಕರಣದ ವಿರುದ್ಧ ಎಐಡಿವೈಒ ರಾಜ್ಯ ಸಮಿತಿಯಿಂದ ಶನಿವಾರ ಚಾಮರಾಜನಗರ ರೈಲು ನಿಲ್ದಾಣದಲ್ಲಿ ರಾಷ್ಟ್ರವ್ಯಾಪಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ನೂರಾರು ಪ್ರಯಾಣಿಕರು ಸಹಿ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಐಡಿವೈಒ ಸದಸ್ಯರಾದ ಸುನೀಲ್, ಕೋಡಿಮೋಳ್ ಕಾಂತರಾಜು, ನಾಗೇಂದ್ರ, ಶಿವಕುಮಾರ್, ಪ್ರಕಾಶ್, ನಿತಿನ್, ರಮೇಶ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com