Back
Chamarajanagar571444blurImage

ಕಾಡುಗಳ್ಳನ ಮೀಣ್ಯಂ ದಾಳಿಗೆ 32 ವರ್ಷ: ಹುತಾತ್ಮ ಪೊಲೀಸರಿಗೆ ಗೌರವ ನಮನ

Surendra
Aug 15, 2024 17:57:33
Minya, Karnataka
ಕಾಡುಗಳ್ಳ ವೀರಪ್ಪನ್ ನಡೆಸಿದ ಪೈಶಾಚಿಕ ಕೃತ್ಯಕ್ಕೆ ಇಂದು 32 ವರ್ಷಗಳಾಗಿದ್ದರೂ ಸ್ವಾತಂತ್ರ್ಯ ದಿನದ ಮುನ್ನ ಬರುವ ಶೋಕಗೀತೆ ಇಂದಿಗೂ ಆ ಭಾಗದಲ್ಲಿ ಹಸಿರಾಗಿದೆ. ಹನೂರು ತಾಲೂಕಿನ ಮಿಣ್ಯಂ ಸಮೀಪ ಪೊಲೀಸ್ ಅಧಿಕಾರಿಗಳು ಮತ್ತು ವೀರಪ್ಪನ್ ತಂಡದ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಪೊಲೀಸರು ಹುತಾತ್ಮರಾಗಿದ್ದರು. ಎಸ್​ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್ ಸೇರಿದಂತೆ 6 ಮಂದಿ ಪೊಲೀಸರು ವೀರಪ್ಪನ್​ ಮೋಸಕ್ಕೆ ಬಲಿಯಾಗಿದ್ದರು. ಮೀಣ್ಯಂ ಸಮೀಪ ನಡೆದ ದಾಳಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು ಪ್ರತಿ ಆ.14 ರಂದು ಹುತಾತ್ಮ ಪೊಲೀಸರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸುತ್ತಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com