
Yadgir: ಶಹಾಪೂರ ತಹಸೀಲ್ದಾರ ಉಮಾಕಾಂತ ಹಳ್ಳೆ ಮನೆ ಮೇಲೆ ದಾಳಿ
ಯಾದಗಿರಿ : ಶಹಾಪೂರ ತಹಶಿಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಶಹಾಪೂರ ತಹಶಿಲ್ದಾರ ಉಮಾಕಾಂತ್ ಹಳ್ಳೆಯವರ ಮನೆ ಮೇಲೆ ದಾಳಿವತಹಶಿಲ್ದಾರ ಕಚೇರಿ ಹಾಗೂ ಕಲಬುರಗಿಯ ನಿವಾಸದ ಮೇಲೆ ದಾಳಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ಎರಡೂ ಕಡೆಗೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ತಹಶಿಲ್ದಾರ ಕಚೇರಿ ಹಾಗೂ ನಿವಾಸದಲ್ಲಿ ಮುಂದುವರೆದ ಪರಿಶೀಲನೆ.
Yadgir - ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ಮೃತ ಯುವತಿಯ ಶವ ಪತ್ತೆ
ನಾರಾಯಣಪೂರ ಎಡದಂಡೆ ಕಾಲುವೆಯಲ್ಲಿ ಯುವತಿಯ ಶವವೊಂದು ಪತ್ತೆಯಾಗಿದೆ ಶಹಾಪೂರ ತಾಲೂಕಿನ ಚಾಮನಾಳ ಗ್ರಾಮದ ಶಾಂತಮ್ಮ ಹುಲಕಲ್ (20 ) ಮೃತ ಯುವತಿಯಾಗಿದ್ದಾಳೆ ಸುರಪುರ ತಾಲೂಕಿನ ಯಾಳಗಿ ಸೀಮಾಂತರದ ಹೊರ ಹೊಲವಲಯದಲ್ಲಿ ಹಾದು ಹೋಗುವ ಮುಖ್ಯ ಕಾಲುವೆಯಲ್ಲಿ ಶವಕಂಡು ರೈತರ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಕೆಂಭಾವಿ ಪೋಲಿಸ್ ಠಾಣಾ ಪಿಎಸ್ ಐ ಅಮೋಜ್ ಕಾಂಬ್ಳೆ ಬೇಟಿ ನೀಡಿ ಪರಿಶೀಲನೆ ನಡೆಸಿದರು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Yadgiri - ಕೊಟ್ಟ ಸಾಲಕ್ಕಾಗಿ ಮಾವನಿಂದಲೇ ಅಳಿಯನ ಹತ್ಯೆ
ಸೋದರ ಮಾವನಿಂದಲೇ ಅಳಿಯನ ಭರ್ಬರ ಹತ್ಯೆ ನಡೆದಿರುವ ಘಟನೆ ಹುಣಸಗಿ ತಾಲೂಕಿನ ಶಖಾಪೂರ ಗ್ರಾಮದಲ್ಲಿ ನಡೆದಿದೆ ಬಹಿರ್ದೇಸೆಗೆ ತೆರಳುತ್ತಿದ್ದ ಅಳಿಯ ಲಕ್ಷ್ಮಣ ಚಿಗರಿಹಾಳ (28) ಮಾವ ಮಾನಪ್ಪ ಕೊಚ್ಚಿ ಬೀಕರವಾಗಿ ಹತ್ಯೆ ಮಾಡಿದ್ದಾನೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಮಾವನಿಂದಲೇ ಅಳಿಯನ ಕೊಲೆ ನಡೆದಿದೆ ನಿಂದು ಸೊಕ್ಕು ಬಾಳ್ ಆಗೈತಿ ಮಗನೇ ಅಂತ ಕೊಡಲಿಯಿಂದ ಕೊಚ್ಚಿದ ಪಾಪಿ ಮುಖಕ್ಕೆ ಕೊಡಲಿಯಿಂದ ಹೊಡೆದು ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಇನ್ನೂ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಜಾವೀದ್ ಇನಾಮದಾರ್ ಅಮೋಜ್ ಕಾಂಬಳೆ ಭೇಟಿ, ಪರಿಶೀಲನೆ ನಡೆಸಿದರು ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೊಲೆ ಆರೋಪಿ ಮಾನಪ್ಪನನ್ನು ಕೆಂಭಾವಿ ಪೋಲಿಸರು ಬಂಧಿಸಿದ್ದಾರೆ.
ಮಳೆಯಿಂದಾಗಿ ಸೇತುವೆ ಕುಸಿದು ಯಾದಗಿರಿಯಿಂದ ಸೈದಾಪುರ ರಸ್ತೆ ಬಂದ್ ಆಗಿದೆ
ಯಾದಗಿರಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವ್ಯವಸ್ಥೆ ಉಂಟಾಗಿದ್ದು, ಯಾದಗಿರಿಯಿಂದ ಸೈದಾಪುರಕ್ಕೆ ತೆರಳುವ ರಸ್ತೆ ಮಧ್ಯೆ ಪಾಗಲ್‌ಪುರ ಸೇತುವೆ ಒಡೆದು ಹೋಗಿದೆ. ರಾತ್ರಿ ಸುರಿದ ಮಳೆಗೆ ಸೇತುವೆ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. 20ಕ್ಕೂ ಹೆಚ್ಚು ಗ್ರಾಮಗಳ ಬುಡಕಟ್ಟು ಜನರು ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಇಂತಹ ಅವಘಡ ಸಂಭವಿಸಿದೆ. ಕೊಹಿಲೂರು, ಕೌಳೂರು, ಮುಷ್ಟಳ್ಳಿ ಹಾಗೂ ಗ್ರಾಮೀಣ ಭಾಗದ ಜನರು ಈ ಸೇತುವೆಯ ಮೂಲಕ ಸಂಚರಿಸುತ್ತಾರೆ.
ಗಿರಿನಾಡಿನಲ್ಲಿ ಮಳೆಯಿಂದಾಗಿ ದೇವಸ್ಥಾನ ಜಲಾವೃತವಾಗಿದೆ
ಯಾದಗಿರಿ: ಗಿರಿನಾಡು ಯಾದಗಿರಿಯಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ವರುಣ ದೇವನ ಪ್ರತಾಪದಿಂದ ದೇಗುಲಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಇನ್ನೂ ಮಕ್ಕಳು ಮಳೆಯ ನೀರಿನಲ್ಲಿ ಈಜಾಡುತ್ತಾ ಸಂತಸ ಪಡುತ್ತಿದ್ದಾರೆ ಎಂದು ಯಾದಗಿರಿ ನಗರದ ನಾಗರಿಕರು ಹೇಳುತ್ತಾರೆ ಕೂಡಲೇ ಹೆಚ್ಚಿಸಬೇಕು ಎಂದು ಅಧಿಕಾರಿಗಳು ಹಾಗೂ ಸಚಿವರಿಗೆ ಮನವಿ ಮಾಡಿದರೂ ದೇವಸ್ಥಾನದ ಕಾಮಗಾರಿ ಆರಂಭವಾಗಿಲ್ಲ. ಭಾರೀ ಪ್ರಮಾಣದ ಕೊಳಚೆ ನೀರು ಕೂಡ ಹರಿಯುತ್ತಿದೆ.