Back
Dakshina Kannada575028blurImage

ಶಾಸಕರ ವಿರುದ್ಧ ಅಡ್ಡೂರಿನಲ್ಲಿ ಬೃಹತ್ ಪ್ರತಿಭಟನೆ

Shamsheer
Sep 01, 2024 15:15:08
Karnataka
ಇತ್ತೀಚಿಗೆ ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಅಡ್ಡೂರು ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದರು. ಇದನ್ನು ಖಂಡಿಸಿ ಇಂದು ಅಡ್ಡೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಊರಿನ ಎಲ್ಲಾ ಧರ್ಮದ ಸಂಘಟನೆಗಳು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿ ಶಾಸಕರನ್ನು ಬಂಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇನ್ನು ಈ ಪ್ರತಿಭಟನೆಯಲ್ಲಿ ಮಾತಾಡಿದ ಅಶ್ರಫ್ ನಡುಗುಡ್ಡೆ, ಸೌಹಾರ್ದತೆಯಿಂದ ಇರೋ ಅಡ್ಡೂರಿನ ಜನರಿಗೆ ಶಾಸಕರ ದೇಶ ಪ್ರೇಮದ ಪಾಠ ಅಗತ್ಯವಿಲ್ಲ ಎಂದರು.ಈ ಸಂದರ್ಭದಲ್ಲಿ ಎಲ್ಲಾ ಸಂಘಟನೆಯ ನಾಯಕರು ಉಪಸ್ಥಿತರಿದ್ದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com