Back
Dakshina Kannada575003blurImage

ರಣಾಂಗಣವಾದ ಮಂಗಳೂರು ಪಾಲಿಕೆ ಸಭೆ

Shamsheer
Aug 31, 2024 16:36:37
Mangaluru, Karnataka
ಮಂಗಳೂರು ನಗರದ ಪಾಲಿಕೆ ಕಚೇರಿಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಸದಸ್ಯರ ನಡುವೆ ತೀವ್ರ ರೀತಿಯ ವಾಕ್ಸಮರ ಉಂಟಾಯಿತು. ಸದಸ್ಯರ ಪರಸ್ಪರ ಮಾತಿನ ಚಕಮಕಿ ನಡುವೆ ಸದನ ಗದ್ದಲಕ್ಕೆ ಒಳಗಾಯಿತು. ವಿಪಕ್ಷ ಸದಸ್ಯರೊಬ್ಬರು ಕಾರ್ಡ್ ಲೆಸ್ ಮೈಕ್ ಆನ್ ಆಗದೇ‌ ಇದ್ದಾಗ ಅದನ್ನು ನೆಲಕ್ಕೆ ಬಡಿದ ಘಟನೆಯೂ ನಡೆಯಿತು. ನಿಗದಿಯಂತೆ ಮಂಗಳಾ ಸಭಾಂಗಣದಲ್ಲಿ ಸಭೆ ಆರಂಭಗೊಂಡು ಮೇಯರ್ ಹಿಂದಿನ ಸಭೆಯ ನಡಾವಳಿಗಳನ್ನು ಸ್ಥಿರೀಕರಿಸುವ ಜೊತೆ ತಾವು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ವಿಪಕ್ಷ ನಾಯಕ&ಸದಸ್ಯರು ಮೇಯರ್ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com