PINEWZ
icon-pinewzicon-zee
PINEWZ
201301
Noida, Gautam Budh Nagar, Uttar Pradesh
Select LanguageLog In
Become a News Creator

Your local stories, Your voice

Follow us on
Download App fromplay-storeapp-store
Advertisement
Back
Bagalkot587103

Bagalkot - ಬಾದಾಮಿ ಪಟ್ಟಣದಲ್ಲಿ ವ್ಯಕ್ತಿ ಕಾಣೆ,ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

May 16, 2025 12:14:58
Bagalkote, Karnataka
ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಜರುಗಿದೆ.ಕಾಣೆಯಾದ ವ್ಯಕ್ತಿಯನ್ನ ನಾಗರಾಜ (29) ನಾಗರಾಜ ಎಂದು ಗುರ್ತಿಸಲಾಗಿದೆ.ಕಳೆದ ಏ.,24. ರಂದು ಮನೆಯಿಂದ ಕಟಿಂಗ್ ಮಾಡಿಸಿಕೊಳ್ಳಲು ಹೋಗುವುದಾಗಿ ಹೇಳಿ ಹೋದ ಯುವಕ ಇದುವರೆಗೂ ವಾಪಸ್ಸು ಮನೆಗೆ ಬಂದಿಲ್ಲ.ಎಲ್ಲಕಡೆ ಹುಡುಕಾಡಿದರೂ ಸಿಗದಿರುವ ಕಾರಣ ಪೋಷಕರು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
0
comment0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com

Advertisement
Aug 13, 2025 07:02:15
Vijayapura, Karnataka:
ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಧರಣಿ ಸತ್ಯಾಗ್ರಹ ನಡೆಯುತ್ತಿದೆ . ಇದೆ ತರಹನಾಗಿ ಇಂದು ವಿಜಯಪುರ ನಗರದ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ ಬಳಿ ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿದ್ದಾರೆ.
14
comment0
Report
Aug 06, 2025 15:38:51
Vijayapura, Karnataka:
ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಕಾರ ದಿಂದ ನೀಡಲಾಗುವ ರಸ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ .ರೈತರ ಪರವಾಗಿ ಇಂದು ರಾಜ್ಯ ದ್ಯಂತ ಬಿಜೆಪಿ ರೈತ ಮೋರ್ಚಾ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಗೆ ಕರೆ ಕೊಟ್ಟಿತು .ಇದೆ ತರಹ ನಾಗಿ ಇಂದು ವಿಜಯಪುರ ನಗರದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು..
14
comment0
Report
Aug 05, 2025 11:00:30
SC Colony, Karnataka:
MSILನಲ್ಲಿ ಹೆಚ್ಚಿನ ದರಕ್ಕೆ ಲೀಕರ್ ಮಾರಾಟ.! ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಚಡಿ ಕ್ರಾ ಗ್ರಾಮದಲ್ಲಿ ಈ ಘಟನೆ. ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕೊಡುತಿದ್ದಾರಾ ಎನ್ನುವ ಪ್ರಶ್ನೆ. ಅಧಿಕಾರಿಗಳಿಗೆ ಗೊತ್ತಿದ್ರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಕೇಳುತ್ತಿರುವ ಅಬಕಾರಿ ಇಲಾಖೆ. ಒಂದು ಬಾಟಲಿಗೆ 10ರೂ ಹೆಚ್ಚಳ ಮಾಡಿ ಮಧ್ಯಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಎಂ ಆರ್ ಪಿ ದರಕ್ಕಿಂತ ಹೆಚ್ಚು ಲಾಭವನ್ನು ಇಟ್ಟು ಮಧ್ಯಪ್ರಿಯರನ್ನು ದಿಕ್ಕು ತಪಸುತ್ತಿರುವ msil ಬೆಳಗಾವಿ ಜಿಲ್ಲೆ ಅಬಕಾರಿ ಇಲಾಖೆ ಅಧಿಕಾರಿಗಳೇ ಈ ಈ ಸ್ಟೋರಿ ನೋಡಲೇಬೇಕು
14
comment0
Report
Aug 05, 2025 07:55:43
Vijayapura, Karnataka:
ವಿಜಯಪುರ ನಗರದಲ್ಲಿ ಸಾರಿಗೆ ಬಸ್ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಸಾರಿಗೆ ಖಾಸಗಿ ಬಸ್ ಗಳ ಓಡಾಟ ಕಂಡು ಬಂತು. ಸರಕಾರಿ ಬಸ್ ಸೇವೆಯಲ್ಲಿದೆ ಜನರು ಆಗಿದ್ದು ಇನ್ನು ಎಷ್ಟು ದಿನ ಬಸ್ ರಸ್ತೆ ಗೆ ಇಳಿಯುತ್ತೇವೆ ಯುನ್ನುವು ಗೊತ್ತಿಲ್ಲ
14
comment0
Report
Aug 04, 2025 07:12:13
Hirebudanur, Karnataka:
ಬೈಲಹೊಂಗಲ ಮತ್ತು ಸವದತ್ತಿ ಶಾಸಕರೇ ನಿದ್ದೆಯಿಂದ ಎದ್ದೇಳಿ ಕ್ಷೇತ್ರದಲ್ಲಿ ಓಡಾಡುವ ರಸ್ತೆಗಳು ಅಭಿವೃದ್ಧಿ ಆಗುವುದು ಯಾವಾಗ್
15
comment0
Report
Aug 03, 2025 05:15:52
Vijayapura, Karnataka:
ವಿಜಯಪುರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ಮಹಿಳಾಮೂರ್ತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಕಾರ್ಯಕರ್ತರ ಸಭೆ ಕಾರ್ಯಕ್ರಮದಲ್ಲಿ ಮಹಿಳಾ ಬಿಜೆಪಿಗೆ ರಾಜ್ಯಾಧ್ಯಕ್ಷೆ ಕುಮಾರಿ ಮಂಜುಳಾ ಅವರು ಭಾಗವಹಿಸಿ ಪತ್ರಿಕಾಗೋಷ್ಠಿಯನ್ನು ಮಾತನಾಡಿದರು.
14
comment0
Report
Jun 15, 2025 15:19:29
Bagalkote, Karnataka:
ಬರುವ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್. ಎಸ್. ಮಂಜುನಾಥ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ, ಉಮ್ಮಸ್ಸು ಕಂಡುಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಯುವ ಕಾಂಗ್ರೆಸ್ ಮುಂದಾಗಬೇಕು. ಮುಂದಿನ ಚುನಾವಣೆಗೂ ಸಜ್ಜಾಗಬೇಕು ಎಂದರು. ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯಂತೆ ಈಗಿನಿಂದಲೇ ಸಂಘಟನೆ ಸದೃಢಗೊಳಿಸಿ 2028ರ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ ಎಂದ ಅವರು, “ಜಮಖಂಡಿಯಲ್ಲಿ ನಮಗೆ ನೀಡಿದ ಅದ್ಭುತ ಸ್ವಾಗತದಿಂದ ಈ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಎಂಬುದು ಸಾಬೀತಾಗಿದೆ” ಎಂದು ಹೇಳಿದರು.
0
comment0
Report
Jun 15, 2025 15:16:34
Bagalkote, Karnataka:
ಬಾಗಲಕೋಟೆ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಬಾಗಲಕೋಟ ವತಿಯಿಂದ ಬಾಗಲಕೋಟೆ ನಗರದ ಖಾಸಗಿ ರೆಸಾರ್ಟ್ ನಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್ಎಸ್ ಮಂಜುನಾಥಗೌಡ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ ಜಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ್ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾದ ಅಬ್ದುಲ್ ದೇಸಾಯಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ , ಉಪಾಧ್ಯಕ್ಷರಾದ ಮಂಜುನಾಥ್ ಮುಚಖಂಡಿ, ಬಾಗಲಕೋಟೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ, ಜಿಲ್ಲಾ ಎಸ್ ಸಿ ಬ್ಲಾಕ್ ಅಧ್ಯಕ್ಷ ರಾಜು ಮನ್ನಿಕೆರಿ ರವರು, ಸೇರಿ ಎಲ್ಲಾ ಜಿಲ್ಲಾ, ತಾಲೂಕ, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕಾರಿಣಿ ಸಭೆ ಯಶಸ್ವಿಗೊಳಿಸಿದರು.
0
comment0
Report
Jun 15, 2025 15:15:17
Bagalkote, Karnataka:
ಜೂನ್.19.ರಂದು ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್ ಪಾವತಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಜಮಖಂಡಿ ನಗರದಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಜೂನ್.19 ಪ್ರಸಕ್ತ ಸಾಲಿನ ಕಬ್ಬಿನ ಬಾಕಿ ಪಾತಿಗೆ ಆಗ್ರಹಿಸಿ ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ರೈತ ಮುಖಂಡ ಈರಪ್ಪ ಹಂಚಿನಾಳ ತಿಳಿಸಿದ್ದಾರೆ.
0
comment0
Report
Jun 15, 2025 15:13:25
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಮತಕ್ಷೇತ್ರದ ಬಂದಕೇರಿ ಗ್ರಾಮದ ಪರಿಶಿಷ್ಠ ಜಾತಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಕಾರಿ ಹಾಗೂ ಯಂಡಿಗೇರಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಅನವಾಲ ಗ್ರಾಮದ ಶ್ರೀ.ಸಿದ್ದೇಶ್ವರ ದೇವಸ್ಥಾನ ಅಭಿವೃದ್ದಿಪಡಿಸುವ ಕಾಮಗಾರಿಗಳಿಗೆ ಶಾಸಕ ಜೆ.ಟಿ‌.ಪಾಟೀಲ್ ಅವರು ಭೂಮಿಪೂಜೆ ನೆರವೇರಿಸಿದರು‌.
0
comment0
Report
Jun 15, 2025 15:09:38
Bagalkote, Karnataka:
ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಹಿಂಭಾಗದಲ್ಲಿನ ಸೇತುವೆ ಮುಳುಗಡೆ ಕಂಡಿದೆ. ಬಾದಾಮಿ ತಾಲೂಕಿನ ಗೋನಾಳ,ಶಿರಬಡಿಗೆ,ಮಂಗಳೂರು, ಶಿವಯೋಗ ಮಂದಿರಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.ಸಧ್ಯ ರಸ್ತೆ ಸಂಚಾರ ಬಂದಾಗಿರುವುದರಿಂದ ಪಾದಾಚಾರಿಗಳು,ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
0
comment0
Report
Jun 13, 2025 09:38:07
Bagalkote, Karnataka:
ಬಾಲಾಜಿ‌ ಮಂದಿರದ ಮುಂದೆ ಹಸುವಿನ ತಲೆ ಹಾಗೂ ಇನ್ನಿತರ ದೇಹದ ಅವಶೇಷಗಳನ್ನು ಇಟ್ಟಿದ್ದನ್ನ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಹಿಂದೂಪರ ಸಂಘಟನೆಗಳ‌ ನೇತೃತ್ವದಲ್ಲಿ ಸಕಲ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.ಕಲಾದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು‌.ಕಳೆದ ಕೆಲವು ದಿನಗಳ ಹಿಂದೆ ಕಲಾದಗಿ ಗ್ರಾಮದ ಬಾಲಾಜಿ ಮಂದಿರದಲ್ಲಿ ದುಷ್ಕರ್ಮಿಗಳು ಹಸುವಿನ ತಲೆ ಹಾಗೂ ಇನ್ನಿತರೇ ದೇಹದ ಅವಶೇಷಗಳನ್ನು ಇಟ್ಟಿ ಹೋಗಿದ್ದರು.ಈ ಹಿನ್ನೆಲೆ ಗ್ರಾಮದಲ್ಲಿ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಮುಖಂಡರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಡಿವೈಎಸ್ಪಿ ಗಜಾನನ ಅವರ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
0
comment0
Report
Jun 13, 2025 09:34:10
Bagalkote, Karnataka:
ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.ಅಪಾರ ಪ್ರಮಾಣದ ಕಬ್ಬು ಬೆಳೆ ಸೇರಿದಂತೆ ಇತರೇ ಬೆಳೆಗಳು ಜಲಾವೃತಗೊಂಡಿವೆ. ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮವಾಗಿ ಹಿರೇಮಾಗಿ ಗ್ರಾಮದಲ್ಲಿ ಮಲಪ್ರಭ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಹಾಗೂ ಹಿರೇಮಾಗಿ ಮತ್ತು ಮಾದಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಠಿಯಾಗಿದೆ.
0
comment0
Report
Jun 12, 2025 11:32:52
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬೃಹತ್ ಮರ ಉರುಳಿ ಕಾರು ಜಖಂಗೊಂಡ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.ನಗರದ ವಿದ್ಯಾಗಿರಿಯಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು ಖಾಲಿ ಸೈಟನಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
0
comment0
Report
Jun 12, 2025 11:31:19
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದ ಸಮೀಪ ಹಿರೇಹಳ್ಳ ತುಂಬಿ ಹರಿಯುತ್ತಿದೆ.ಪರಿಣಾಮ ಹಳ್ಳದ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.ಈಗತಾನೆ ಜಮೀನುಗಳು ಬಿತ್ತನೆಗೊಂಡಿದ್ದು,ಇನ್ನು ಕೆಲವೆಡೆ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿದೆ. ಸಧ್ಯ ಯಾವುದೇ ಬೆಳೆಹಾನಿಯಿಲ್ಲ. ಇನ್ನು ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
0
comment0
Report
Independence Day
Advertisement
Back to top