Back
Bagalkote - ಮೇ.17 ರಂದು ಹೆಸ್ಕಾಂ ಗ್ರಾಹಕ ಸಂವಾದ ಸಭೆ
Bagalkote, Karnataka
ಬಾಗಲಕೋಟೆ ಹೆಸ್ಕಾಂ ನ ಬಾಗಲಕೋಟ ಕಾರ್ಯ ಮತ್ತು ಪಾಲನಾ ನಗರ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ರಿಂದ 12 ಘಂಟೆಯವರೆಗೆ ಗ್ರಾಹಕರ ಸಂವಾದ ಸಭೆ ಜರುಗಲಿದ್ದು ಸದರಿ ಉಪವಿಭಾಗ ವ್ಯಾಪ್ತಿಯಲ್ಲಿನ ಗ್ರಾಹಕರು ಹಾಜರಾಗಿ, ತಮ್ಮ ವಿದ್ಯುತ್ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ, ಉಪವಿಭಾಗದ ಗ್ರಾಹಕರ ಸೇವೆಯಲ್ಲಿನ ಗುಣಮಟ್ಟವನ್ನು ಹೆಚ್ಚಿಸಲು ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಲು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0
Report
For breaking news and live news updates, like us on Facebook or follow us on Twitter and YouTube . Read more on Latest News on Pinewz.com
Advertisement
Bagalkote, Karnataka:
ಬರುವ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಲಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್. ಎಸ್. ಮಂಜುನಾಥ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ, ಉಮ್ಮಸ್ಸು ಕಂಡುಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಯುವ ಕಾಂಗ್ರೆಸ್ ಮುಂದಾಗಬೇಕು. ಮುಂದಿನ ಚುನಾವಣೆಗೂ ಸಜ್ಜಾಗಬೇಕು ಎಂದರು.
ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯಂತೆ ಈಗಿನಿಂದಲೇ ಸಂಘಟನೆ ಸದೃಢಗೊಳಿಸಿ 2028ರ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ ಎಂದ ಅವರು, “ಜಮಖಂಡಿಯಲ್ಲಿ ನಮಗೆ ನೀಡಿದ ಅದ್ಭುತ ಸ್ವಾಗತದಿಂದ ಈ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಎಂಬುದು ಸಾಬೀತಾಗಿದೆ” ಎಂದು ಹೇಳಿದರು.
0
Report
Bagalkote, Karnataka:
ಬಾಗಲಕೋಟೆ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ಬಾಗಲಕೋಟ ವತಿಯಿಂದ ಬಾಗಲಕೋಟೆ ನಗರದ ಖಾಸಗಿ ರೆಸಾರ್ಟ್ ನಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್ಎಸ್ ಮಂಜುನಾಥಗೌಡ ಅವರ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿಗಳಾದ ನಿಗಮ್ ಭಂಡಾರಿ ಜಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ್ ಅವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾದ ಅಬ್ದುಲ್ ದೇಸಾಯಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ , ಉಪಾಧ್ಯಕ್ಷರಾದ ಮಂಜುನಾಥ್ ಮುಚಖಂಡಿ, ಬಾಗಲಕೋಟೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನಂಜಯ್ಯನಮಠ, ಜಿಲ್ಲಾ ಎಸ್ ಸಿ ಬ್ಲಾಕ್ ಅಧ್ಯಕ್ಷ ರಾಜು ಮನ್ನಿಕೆರಿ ರವರು, ಸೇರಿ ಎಲ್ಲಾ ಜಿಲ್ಲಾ, ತಾಲೂಕ, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕಾರಿಣಿ ಸಭೆ ಯಶಸ್ವಿಗೊಳಿಸಿದರು.
0
Report
Bagalkote, Karnataka:
ಜೂನ್.19.ರಂದು ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಬಿಲ್ ಪಾವತಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಜಮಖಂಡಿ ನಗರದಲ್ಲಿ ನಡೆದ ಕಬ್ಬು ಬೆಳೆಗಾರರ ಸಂಘದ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.ಜೂನ್.19 ಪ್ರಸಕ್ತ ಸಾಲಿನ ಕಬ್ಬಿನ ಬಾಕಿ ಪಾತಿಗೆ ಆಗ್ರಹಿಸಿ ಬಾಗಲಕೋಟೆ ನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ರೈತ ಮುಖಂಡ ಈರಪ್ಪ ಹಂಚಿನಾಳ ತಿಳಿಸಿದ್ದಾರೆ.
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಮತಕ್ಷೇತ್ರದ ಬಂದಕೇರಿ ಗ್ರಾಮದ ಪರಿಶಿಷ್ಠ ಜಾತಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಕಾರಿ ಹಾಗೂ ಯಂಡಿಗೇರಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಅನವಾಲ ಗ್ರಾಮದ ಶ್ರೀ.ಸಿದ್ದೇಶ್ವರ ದೇವಸ್ಥಾನ ಅಭಿವೃದ್ದಿಪಡಿಸುವ ಕಾಮಗಾರಿಗಳಿಗೆ ಶಾಸಕ ಜೆ.ಟಿ.ಪಾಟೀಲ್ ಅವರು ಭೂಮಿಪೂಜೆ ನೆರವೇರಿಸಿದರು.
0
Report
Bagalkote, Karnataka:
ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಹಿಂಭಾಗದಲ್ಲಿನ ಸೇತುವೆ ಮುಳುಗಡೆ ಕಂಡಿದೆ.
ಬಾದಾಮಿ ತಾಲೂಕಿನ ಗೋನಾಳ,ಶಿರಬಡಿಗೆ,ಮಂಗಳೂರು, ಶಿವಯೋಗ ಮಂದಿರಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.ಸಧ್ಯ ರಸ್ತೆ ಸಂಚಾರ ಬಂದಾಗಿರುವುದರಿಂದ ಪಾದಾಚಾರಿಗಳು,ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
0
Report
Bagalkote, Karnataka:
ಬಾಲಾಜಿ ಮಂದಿರದ ಮುಂದೆ ಹಸುವಿನ ತಲೆ ಹಾಗೂ ಇನ್ನಿತರ ದೇಹದ ಅವಶೇಷಗಳನ್ನು ಇಟ್ಟಿದ್ದನ್ನ ಖಂಡಿಸಿ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಸಕಲ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದರು.ಕಲಾದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಯಿತು.ಕಳೆದ ಕೆಲವು ದಿನಗಳ ಹಿಂದೆ ಕಲಾದಗಿ ಗ್ರಾಮದ ಬಾಲಾಜಿ ಮಂದಿರದಲ್ಲಿ ದುಷ್ಕರ್ಮಿಗಳು ಹಸುವಿನ ತಲೆ ಹಾಗೂ ಇನ್ನಿತರೇ ದೇಹದ ಅವಶೇಷಗಳನ್ನು ಇಟ್ಟಿ ಹೋಗಿದ್ದರು.ಈ ಹಿನ್ನೆಲೆ ಗ್ರಾಮದಲ್ಲಿ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಮುಖಂಡರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಡಿವೈಎಸ್ಪಿ ಗಜಾನನ ಅವರ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದರು.
0
Report
Bagalkote, Karnataka:
ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಬಾಗಲಕೋಟೆ ಜಿಲ್ಲೆಯ ಹಿರೇಮಾಗಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.ಅಪಾರ ಪ್ರಮಾಣದ ಕಬ್ಬು ಬೆಳೆ ಸೇರಿದಂತೆ ಇತರೇ ಬೆಳೆಗಳು ಜಲಾವೃತಗೊಂಡಿವೆ.
ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.ಪರಿಣಾಮವಾಗಿ ಹಿರೇಮಾಗಿ ಗ್ರಾಮದಲ್ಲಿ ಮಲಪ್ರಭ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಹಾಗೂ ಹಿರೇಮಾಗಿ ಮತ್ತು ಮಾದಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಸೃಷ್ಠಿಯಾಗಿದೆ.
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬೃಹತ್ ಮರ ಉರುಳಿ ಕಾರು ಜಖಂಗೊಂಡ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.ನಗರದ ವಿದ್ಯಾಗಿರಿಯಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು ಖಾಲಿ ಸೈಟನಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದ ಸಮೀಪ ಹಿರೇಹಳ್ಳ ತುಂಬಿ ಹರಿಯುತ್ತಿದೆ.ಪರಿಣಾಮ ಹಳ್ಳದ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.ಈಗತಾನೆ ಜಮೀನುಗಳು ಬಿತ್ತನೆಗೊಂಡಿದ್ದು,ಇನ್ನು ಕೆಲವೆಡೆ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿದೆ.
ಸಧ್ಯ ಯಾವುದೇ ಬೆಳೆಹಾನಿಯಿಲ್ಲ.
ಇನ್ನು ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಮಳೆಯಿಂದಾಗ ಬೆಣ್ಣೆ ಹಳ್ಳದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದ ಪರಿಣಾಮವಾಗಿ ಗುಳೇದಗುಡ್ಡ ಪಟ್ಟಣದ ಪರ್ವತಿ ಸೇತುವೆ ಹಾಗೂ ಆಸಂಗಿ ಗ್ರಾಮಕ್ಕೆ ತೆರಳುವ ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ.
ಗುಳೇದಗುಡ್ಡ ಪಟ್ಟಣದಿಂದ ಆಸಂಗಿ ಗ್ರಾಮಕ್ಕೆ ತೆರಳುವ ದರ್ಗಾ ಹತ್ತಿರದ ಸೇತುವೆ ಹಾಗೂ ಪಟ್ಟಣದಿಂದ ಪರ್ವತಿಗೆ ತೆರಳುವ ಸೇತುವೆಯ ಮೇಲೆ ಅಪಾರ ಪ್ರಮಾಣದಲ್ಲಿ ಮಳೆ ಮತ್ತು ಹಳ್ಳದ ನೀರು ಹರಿದು ಬಂದ ಪರಿಣಾಮವಾಗಿ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಇದರಿಂದಾಗಿ ಪರ್ವತಿ ಹಾಗೂ ಆಸಂಗಿ ಕಟಗಿನಹಳ್ಳಿ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ.
ಗುಳೇದಗುಡ್ಡದಿಂದ ಆಸಂಗಿ ಲಾಯದಗುಂದಿ ಗ್ರಾಮಕ್ಕೆ ತೆರಳುವ ಸೇತುವೆ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡ ನಿಮಿತ್ತ ಪಟ್ಟಣದ ಪುರಸಭೆ ಅತ್ತ ಸೇತುವೆ ಮೇಲೆ ಯಾರೂ ತೆರಳದಂತೆ ಬ್ಯಾರಿಕೇಡ್ ಅಳವಡಿಸಿದ್ದಾರೆ.
0
Report
Bagalkote, Karnataka:
ಬಾಗಲಕೋಟೆ ನಗರಸಭೆಯ ನಿರ್ಲಕ್ಷತನದಿಂದ ಚೇಂಬರಗಳು ಬ್ಲಾಕ್ ಆದ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಚರಂಡಿ ನೀರಿನಲ್ಲೆ ನೀರಿನಲ್ಲೇ ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ.ಬಾಗಲಕೋಟೆಯ ನವನಗರದ ಸೆಕ್ಟರ್ ನಂ. 46 ರಲ್ಲಿನ ಕನ್ನಡ ಹಿರಿಯ ಗಂಡುಮಕ್ಕಳ ಶಾಲೆಯ ಗೇಟ ಬಳಿ ಚೇಂಬರ್ ಬ್ಲಾಕ್ ಅಗಿದೆ.ಪರಿಣಾಮ ಚರಂಡಿ ನೀರು ರಸ್ತೆ ಸೇರುತ್ತಿದ್ದು,ಶಾಲಾ ವಿದ್ಯಾರ್ಥಿಗಳು ಚರಂಡಿ ನೀರನ್ನೇ ತುಳಿದು ಶಾಲೆ ಪ್ರವೇಶಿಸಬೇಕಾಗಿದೆ. ವಾಹನ ಸವಾರರು,ಪಾದಾಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಯಶಸ್ವಿಯಾಗಿ ಜರುಗಿದ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ.
ಜಮಖಂಡಿ ತಾಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ತಾಲೂಕಾಡಳಿತ ಮತ್ತು ಬಾಲಿಕೆಯರ ಸರಕಾರಿ ಪದವಿ ಪೂರ್ವ ಪ್ರೌಡ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಸರ್ಕಾರಿ ಬಾಲಿಕೆಯರ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನ ತಾಲೂಕು ಕಾನೂನು ಸೇವಾ ಸಮಿತಿ ಅದ್ಯಕ್ಷರು ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ಎಸ್ ಹರಸೂರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಲಕೀಯರ ಸರ್ಕಾರಿ ಪ.ಪೂ. ಕಾಲೇಜು, ಪ್ರೌಢ ವಿಭಾಗದ ಪ್ರಾಚಾರ್ಯರ ಮಹಾಂತೇಶ ನರಸನಗೌಡ,
ಮುಖ್ಯ ಅತಿಥಿಗಳಾದ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಅರ್ಶದ ಎ.ಅನ್ಸಾರಿ,ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಎಸ್.ಬಿ.ಕಾಳೆ,ನ್ಯಾಯವಾದಿ ಎಲ್.ಎಲ್ ಸವದಿ,ಕಾರ್ಮಿಕ ನೀರಿಕ್ಷಕ ಪಿ.ವಿ.ಮಾವರಕರ
0
Report
Bagalkote, Karnataka:
ಬಾಗಲಕೋಟೆ ಜಿಲ್ಲೆಯಾದ್ಯಂತ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಗುಳೇದಗುಡ್ಡ ಪಟ್ಟಣದ ಪೆಟ್ರೋಲ್ ಬಂಕ್ ಗೆ ನೀರು ನುಗ್ಗಿದೆ. ಪಟ್ಟಣದ ಬಸ್ ನಿಲ್ದಾಣ ಹತ್ತಿರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ದುತ್ತರಗಿ ಪೆಟ್ರೋಲ್ ಬಂಕ್ ಆವರಣದ ತುಂಬೆಲ್ಲ ಮಳೆ ನೀರು ಆವರಿಸಿಕೊಂಡು ಬೈಕ್ ,ಕಾರ್ ಜೊತೆ ಇತರೆ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ತುಂಬಿಸಿಕೊಳ್ಳಲು ಗ್ರಾಹಕರಿಗೆ ಬಹಳಷ್ಟು ಅಡೆತಡೆ ಉಂಟು ಮಾಡಿದ ಪ್ರಸಂಗ ನಡೆಯಿತು. ಗುಳೇದಗುಡ್ಡ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ, ಹಳ್ಳದ ನೀರು ಪೆಟ್ರೋಲ್ ಬಂಕ್'ಗೆ ನುಗ್ಗಿದೆ.
0
Report
Bagalkote, Karnataka:
ಮಹಿಳಾ ಸಾಮೂಹಿಕ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದಿದೆ. ಮಹಿಳಾ ಸಾಮೂಹಿಕ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಯಾರೋ ಪಾಪಿಗಳು ಶೌಚಾಲಯದಲ್ಲಿ ನವಜಾತ ಶಿಶುವನ್ನ ಎಸೆದು ಹೋಗಿದ್ದಾರೆಂದು ತಿಳಿದು ಬಂದಿದೆ.ಪಾಪಕೃತ್ಯ ಮಾಡಿದವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣೆ ಪಿ.ಎಸ್.ಐ ಗಂಗಾಧರ ಪೂಜೇರಿ, ಎ.ಎಸ್.ಐ ಕೆ.ಪಿ.ಸವದತ್ತಿ ಹಾಗೂ ಪೋಲಿಸ್ ತಂಡ ಆಗಮಿಸಿ ಪರಿಶೀಲನೆ ನಡೆಸಿ ಶವ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಮ್.ಆರ್.ಮೇತ್ರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎ.ಸಾರವಾನ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0
Report
Bagalkote, Karnataka:
ಎರಡು ಸಾವಿರ ರೂಪಾಯಿಗಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನ ಹೊಟ್ಟೆಗೆ ಕತ್ತರಿ ತಾಗಿದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಕುಂಚನೂರ್ ಕಾಂಪ್ಲೆಕ್ಸ್ ಬಳಿ ಜರುಗಿದೆ.ಗಾಯಗೊಂಡ ವ್ಯಕ್ತಿಯನ್ನ ಶ್ರೀಧರ ಟರ್ಕಿ(39) ಎಂದು ಗುರ್ತಿಸಲಾಗಿದೆ. ಗಾಯಾಳುವನ್ನ ಜಮಖಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ವೃತ್ತಿಯಲ್ಲಿ ಟೇಲರ್ ಆಗಿರುವ ಕುಮಾರ ಬಕ್ರೆ ಅವರು ಹೊಟ್ಟೆಗೆ ಕತ್ತರಿ ತಾಗಿಸಿದ್ದಾರೆ ಎಂದು ತಿಳಿದುಬಂದಿದೆ.ಬಾಕಿ ಹಣದ ವಿಚಾರವಾಗಿ ವಾಗ್ವಾದ ನಡೆದು ಕತ್ತರಿ ಇತಿತವಾಗಿದೆ.ಕುಮಾರ್ ಎನ್ನುವ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ
0
Report