Back
Bagalkot587102blurImage

Bagalkote - ಅಮೀನಗಡದ‌ ಬಳಿ ಭೀಕರ ರಸ್ತೆ ಅಪಘಾತ,ಒಂದೇ ಕಾರಿನಲ್ಲಿದ್ದ ತಾಯಿ ಮಗ ಸಾವು

Somashekhar
May 15, 2025 05:43:42
Bagalkote, Karnataka
ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ, ಒಂದೇ ಕಾರಿನಲ್ಲಿದ್ದ ಇಬ್ಬರ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಬಳಿ ಜರುಗಿದೆ. ಅಪಘಾತ ದಲ್ಲಿ ಒಂದೇ ಕಾರಿನಲ್ಲಿದ್ದ ತಾಯಿ ಮಗ ಸಾವನ್ನಪ್ಪಿದ್ದು, ತಂದೆ ಇನ್ನೋರ್ವ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರನ್ನ ಗಂಗಮ್ಮ ಅಂಗಡಿ (50), ಸಂದೇಶ ಅಂಗಡಿ (18) ಎಂದು ಗುರ್ತಿಸಲಾಗಿದೆ.ಗಾಯಾಳುಗಳನ್ನ ವೀರೇಶ(54) ,ಸತೀಶ (28)ಅಂಗಡಿ ಎಂದು ಗುರ್ತಿಸಲಾಗಿದೆ. ಗಾಯಾಳುಗಳನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಾದಾಮಿ ತಾಲೂಕಾ ನೆಲುಗಿ ಗ್ರಾಮದವರೆಂಸು ತಿಳಿದು ಬಂದಿದೆ.ಇನ್ನೊಂದು‌ ಕಾರಿನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com