Back
Dakshina Kannada574199blurImage

Dakshina kannada - ಕುಪ್ಪೆಪದವು ನಿವೇಶನ ಸಂತ್ರಸ್ತರ ಅನಿರ್ಧಿಷ್ಟಾವಧಿ ಧರಣಿ

Shamsheer
May 28, 2025 13:51:27
Karnataka
ದಕ್ಷಿಣ ಕನ್ನಡ ಜಿಲ್ಲೆಯ ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆದರೆ, ಹಕ್ಕುಪತ್ರ ನೀಡಿ ಆರು ವರ್ಷ ಕಳೆದರೂ 97 ಕುಟುಂಬಳಿಗೂ ನಿವೇಶನ ಹಸ್ತಾಂತರ ಮಾಡಲಿಲ್ಲ. ಕಾದು ಬಸವಳಿದ ಈ ಬಡ ಕುಟುಂಬಗಳು ಈಗ ಸ್ಥಳೀಯ ಕಾರ್ಮಿಕ ಸಂಘಟನೆಗಳು, ಸಿಪಿಐಎಂ ಮುಖಂಡರ ಮಾರ್ಗದರ್ಶನದಲ್ಲಿ ಹೋರಾಟ ಸಮಿತಿ ರಚಿಸಿ ಹೋರಾಟ ಶುರು ಮಾಡಿದ್ದಾರೆ. ಕಳೆದ ಜನವರಿಯಿಂದ ಧರಣಿ, ಪ್ರತಿಭಟನೆ ನಡೆಸಿದರೂ ನ್ಯಾಯ ದೊರಕದ ಹಿನ್ನಲೆಯಲ್ಲಿ ಈಗ ಕುಪ್ಪೆಪದವು ಗ್ರಾಪಂ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ. ನಿನ್ನೆ ಮಹಾಮಳೆಯನ್ನೂ ಲೆಕ್ಕಿಸದೆ ಬಡ ನಿವೇಶನ ಸಂತ್ರಸ್ತರು ಅನಿರ್ಧಿಷ್ಟಾವಧಿ ಧರಣಿಗೆ ಚಾಲನೆ ನೀಡಿದ್ದಾರೆ. ಸಂಜೆ ಸ್ಥಳಕ್ಕೆ ತಾಲೂಕು ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಆದಷ್ಟು ಬೇಗ ನಿವೇಶನ ವಿತರಿಸುವುದಾಗಿ ಭರವಸೆ ನೀಡಿದ್ದಾರೆ
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com