Back
Bagalkot587103blurImage

Bagalkot ಸಿ.ಎನ್.ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ ಆರೋಪ,ಜಮಖಂಡಿ ನಗರದಲ್ಲಿ ಚಾಲಕರ ಪ್ರತಿಭಟನೆ

Somashekhar
May 16, 2025 12:05:46
Bagalkote, Karnataka
ಸಿಎನ್ ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಜಮಖಂಡಿ ನಗರದಲ್ಲಿನ ಎರಡು ಪೆಟ್ರೋಲ್ ಬಂಕ್ ಗಳ ಮುಂದೆ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.ಎರಡು ಪೆಟ್ರೋಲ್ ಬಂಕ್ ನಲ್ಲಿ ಆಟೋ, ಕಾರು ಚಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಮಖಂಡಿ ನಗರದಲ್ಲಿರುವ ಭಾರತ್ ಪೆಟ್ರೋಲಿಯಂ ಎಜೆನ್ಸಿ ಬಂಕ್ ಗಳಲ್ಲಿ ಸಿಬಿಜಿ ಪೂರೈಕೆ ಬಂದ್ ಮಾಡಿಸಿ ಚಾಲಕರು ಪ್ರತಿಭಟನೆ ನಡೆಸಿದರು. ಸಿಎನ್ ಜಿ ಬೋರ್ಡ್ ಹಾಕಿ ಸಿಬಿಜಿ ಪೂರೈಕೆ ಮಾಡ್ತಿದಾರೆ ಎಂದು ಆರೋಪಿಸಿದರು.ಸಿಬಿಜಿಯಿಂದ ನಮ್ಮ ವಾಹನಗಳು ಉತ್ತಮ ಮೈಲೇಜ್ ಕೊಡ್ತಿಲ್ಲ,ಹಾಗಾಗಿ ಸಿಬಿಜಿ ಬದಲಿಸಿ ಸಿಎನ್ ಜಿ ಪೂರೈಸುವಂತೆ ಒತ್ತಾಯಿಸಿದರು.ಪೆಟ್ರೋಲ್ ಬಂಕನವರು ಎರಡು ದಿನಗಳ ಕಾಲಾವಕಾಶ ಕೇಳಿದ ಬೆನ್ನಲ್ಲೆ ಚಾಲಕರು ಪ್ರತಿಭಟನೆ ವಾಪಸ್ ಪಡೆದರು.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com