Back
Dakshina Kannada575001blurImage

Mangalore: ಮತ್ತೆ ಮುಳುಗಿದ ಕುಖ್ಯಾತ ಪಂಪ್ ವೆಲ್‌ ಫ್ಳೈಓವರ್

Shamsheer
May 27, 2025 07:59:17
Mangaluru, Karnataka
ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಈ ನಡುವೆ ಎಂದಿನಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದು ನದಿಯಂತಾಯಿತು. ಪಂಪ್ ವೆಲ್ ಫೈಓವರ್ ಕೆಳಭಾಗದಲ್ಲಿ ಕೆಸರು ಬೆರೆತ ಕೆಂಪು ನೀರು ರಸ್ತೆಗೆ ನುಗ್ಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಯ್ತು. ಪಂಪ್ ವೆಲ್ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿದ್ದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಟೋ ರಿಕ್ಷಾ, ದ್ವಿಚಕ್ರ ವಾಹನ ಸವಾರರು ಕೆಲಹೊತ್ತು ಶೇಖರಣೆಯಾಗಿದ್ದ ನೀರಿನಲ್ಲೇ ವಾಹನಗಳನ್ನು ತಳ್ಳಿಕೊಂಡು ಸಾಗಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com