Back
Dakshina Kannada575001blurImage

Mangalore - ಪತ್ನಿಯ ಸೀಮಂತದ ದಿನವೇ ಪತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ

Shamsheer
May 23, 2025 14:29:08
Mangaluru, Karnataka
ಪತ್ನಿಯ ಸೀಮಂತದ ದಿನದಂದೇ ಪತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ದಕ್ಷಿಣ ಕನ್ನಡ ಲ್ ವಿಟ್ಲ ಸಮೀಪದ ಕನ್ಯಾನದಲ್ಲಿ ನಡೆದಿದೆ. ಮೃತರನ್ನು ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ವಾಹನದ ಚಾಲಕ ಸತೀಶ್ (33) ಎಂದು ಗುರುತಿಸಲಾಗಿದೆ. ಸತೀಶ್ ಅವರ ಪತ್ನಿಯ ಸೀಮಂತ ಶುಕ್ರವಾರ ನಿಗದಿಯಾಗಿತ್ತು. ತನ್ನ ಪತ್ನಿಯ ಸೀಮಂತ ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದ ವೇಳೆ ಮನೆಯಲ್ಲಿ ಬೆಳಿಗ್ಗೆ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com