Become a News Creator

Your local stories, Your voice

Follow us on
Download App fromplay-storeapp-store
Advertisement
Back
Somashekhar Pujar
BagalkotBagalkot

ಕೊಲ್ಕತ್ತಾ ವೈದ್ಯೆ ಕೊಲೆ ಖಂಡಿಸಿ ಗುಳೇದಗುಡ್ಡದಲ್ಲಿ ಕ್ಯಾಂಡಲ್ ಮಾರ್ಚ್

SPSomashekhar PujarAug 25, 2024 03:28:07
Guledagudda, Karnataka:

ಕೊಲ್ಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಗುಳೇದಗುಡ್ಡದಲ್ಲಿ ಮಾಹೇಶ್ವರಿ ಮತ್ತು ಸಖಿ ಮಹಿಳಾ ಮಂಡಳ ಕ್ಯಾಂಡಲ್ ಮಾರ್ಚ್ ನಡೆಸಿತು. ಪ್ರತಿಭಟನಾಕಾರರು ಸರಕಾರಿ ಆಸ್ಪತ್ರೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪುರಸಭೆ ಸದಸ್ಯೆ ವಂದನಾ ಭಟ್ಟಡ ಮಾತನಾಡಿ, ಈ ಘಟನೆ ಅಮಾನವೀಯ ಎಂದು ಹೇಳಿ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

0
comment0
Report
Bagalkot587301

ರಾಜ್ಯಪಾಲರನ್ನ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

SPSomashekhar PujarAug 24, 2024 11:36:51
Bagalkot, Karnataka:

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿದ ಕಾಂಗ್ರೆಸ್ ನವರು ರಾಜ್ಯಪಾಲರು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಪಾಲರು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

0
comment0
Report
Bagalkot587103

ಬಾಗಲಕೋಟೆ ಜಿಲ್ಲೆಯ ಬಾದಾಮಿ ಪ್ರದೇಶದಲ್ಲಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ

SPSomashekhar PujarAug 03, 2024 01:47:27
Bagalkote, Karnataka:

ಬಾಗಲಕೋಟೆ ಜಿಲ್ಲೆಯ ಬಾದಾಮಿ ಭಾಗದಲ್ಲಿ ಮಲಪ್ರಭಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ನದಿ ಭೂಮಿಗೆ ನೀರು ನುಗ್ಗಿದ್ದು, ನವಿಲುತೀರ್ಥ ಜಲಾಶಯದಿಂದ ಸುಮಾರು ಹದಿನೈದು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಭಾಗದ ಗೋವಿನಕೊಪ್ಪ ಗ್ರಾಮದ ಸುತ್ತಮುತ್ತಲಿನ ಜಮೀನು ಜಲಾವೃತಗೊಂಡಿದೆ. ಜೋಳ, ಹಸುವಿನ ಜೋಳ, ಈರುಳ್ಳಿ ಸೇರಿದಂತೆ ಬೆಳೆಗಳು. ಗೋವಿನಕೊಪ್ಪ ಸೇತುವೆಯೂ ಮುಳುಗಡೆಯಾಗಿದೆ. ಬಂದರೆ ಜಲಪ್ರಳಯ. ಜಿಲ್ಲಾಡಳಿತ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

0
comment0
Report
Advertisement
Back to top