Back

Mandya - ಮಗುವಿಗೆ ಸಿಂಧೂರಿ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದ ದಂಪತಿ
Melapura, Karnataka:
ಪಾಕಿಸ್ತಾನದ ವಿರುದ್ದ ಆಪರೇಶನ್ ಸಿಂಧೂರ್ ಕಾರ್ಯಚಾರಣೆ ಯಶಸ್ವಿ ಹಿನ್ನಲೆಯಲ್ಲಿ ತಾಲೂಕಿನ ಬಿ.ಆರ್.ಕೊಪ್ಪಲು ಗ್ರಾಮದಲ್ಲಿ ತಮ್ಮ ಮಗುವಿಗೆ ಸಿಂಧೂರಿ ಎಂದು ಹೆಸರಿಟ್ಟು ನಾಮಕರಣ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಿ.ಆರ್.ಕೊಪ್ಪಲು ಗ್ರಾಮದ ಸೋಮಶೇಖರ್ ಹಾಗು ಹರ್ಷಿತಾ ದಂಪತಿ ದೇಶಪ್ರೇಮ ಮೆರೆದಿದ್ದು,ಮಗುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿ ದೇಶಪ್ರೇಮ ಮೆರದಿರುವ ಸುದ್ದಿ ತಿಳಿದು ಮಂಡ್ಯರಕ್ಷಣಾ ವೇದಿಕೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ದೇಶ ಪ್ರೇಮಿ ದಂಪತಿಗೆ ಸನ್ಮಾನಿದ್ದು, ಆ ಮಗುವಿನ ವಿದ್ಯಾಭ್ಯಾಸದ ನೆರವಿಗೆಂದು 10000 ರೂ ಠೇವಣಿ ಇಟ್ಟು ಆರ್ಥಿಕ ನೆರವು ನೀಡಿ ಮನೆಯವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ.
1
Report
ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀಕೃಷ್ಣನ ಒಟ್ಲು ಉತ್ಸವ
Srirangapatna, Karnataka:
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀರಂಗ ಪಟ್ಟಣದಲ್ಲಿ ಶ್ರೀ ಕೃಷ್ಣನ ಒಟ್ಲು ಉತ್ಸವ ವಿಜೃಂಭಣೆಯಿಂದ ನಡೆಯಿತು.ಪಟ್ಟಣದ ಐದಾರು ಕಡೆ ಎತ್ತರದ ಒಟ್ಲುಗಳನ್ನು ಕಟ್ಟಿ, ಅದಕ್ಕೆ ವಿವಿಧ ಬಗೆಯ ತಿಂಡಿಗಳನ್ನು ನೇತುಹಾಕಿ ಅದನ್ನು ಹೊಡೆಯುವ ವಿಶಿಷ್ಟ ಉತ್ಸವ ವನ್ನು ಶ್ರೀಕೃಷ್ಣನ ಭಕ್ತರು ಸಂಭ್ರಮ ದಿಂದ ಆಚರಿಸಿದರು.ಎತ್ತರದಲ್ಲಿ ನೇತು ಹಾಕಿ ಕಟ್ಟಿರುವ ಒಟ್ಲನ್ನು ಕಡ್ಡಿಯಿಂದ ಹೊಡೆಯುವ ಯುವಕರಿಗೆ ಭಕ್ತರು ಬಣ್ಣದ ನೀರಿನ ಓಕುಳಿಯಿಂದ ಅವರನ್ನು ತಡೆಯವ ಕೆಲಸ ನಡೆಯಿತು. ಈ ವಿಶಿಷ್ಟ ಉತ್ಸವವನ್ನ ಸುತ್ತಮುತ್ತಲ ಭಕ್ತರು ಆಗಮಿಸಿ ನೋಡಿ ಕಣ್ತುಂಬಿಕೊಂಡರು.
1
Report
ಸೆಂಟ್ರಲ್ ಜೈಲಿನಲ್ಲಿ ಪಂಚತಾರ ವ್ಯವಸ್ಥೆ ಹಿಂದಿನಿಂದಲೂ ಇದೆ : ಎಚ್ಡಿಕೆ
Mandya, Karnataka:
ಬೆಂಗಳೂರಿನ ಸೆಂಟ್ರಲ್ ಪರಪ್ಪ ಅಗ್ರಹಾರದಲ್ಲಿ ಕೈದಿಗಳಿಗಾಗಿ ಪಂಚತಾರಾ ಹೋಟೆಲ್ ಇದೆ. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಮಂಡ್ಯ, ಹಣ ಕೊಟ್ಟರೆ ಏನು ಬೇಕಾದರೂ ಕೊಳ್ಳಬಹುದು ಎಂದು ಈಗ ತಾತ್ವಿಕವಾಗಿ ಪ್ರಚಾರ ಮಾಡಲಾಗಿದೆ. ಇದಕ್ಕೂ ಮುನ್ನ ಡಿಜಿ ಮತ್ತು ಡಿಸಿಪಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ತನಿಖೆ ನಡೆಸಬೇಕು ಎಂದು ಗದ್ದಲ ಎದ್ದರು. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಪಂಚತಾರಾ ಸೌಲಭ್ಯವಿದೆ. ಈಗ ತತ್ವಶಾಸ್ತ್ರದ ವಿಷಯದಲ್ಲಿ ಇದು ಮುನ್ನೆಲೆಗೆ ಬಂದಿದೆ. ಆ ಕೈದಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಸರ್ಕಾರ ನಿರ್ಧರಿಸುತ್ತಿದೆಯಂತೆ.
1
Report
ಕಬ್ಬು ಕಟಾವು ವಿಳಂಬ: ಬೇವು ತಿಂದು ರೈತರ ಪ್ರತಿಭಟನೆ
Mandya, Karnataka:
ರೈತರ ಬೆಳೆದು ನಿಂತ ಕಬ್ಬನ್ನ ಕಟಾವು ಮಾಡಿಸದ ಮಂಡ್ಯ ಜಿಲ್ಲಾಡಳಿತದ ವಿರುದ್ಧ ತಾಲೂಕಿನ ರೈತರು ರೊಚ್ಚಿಗೆದ್ದಿದ್ದಾರೆ.ಇಂದು
ಕಬ್ಬು ಕಟಾವಿಗೆ ಒತ್ತಾಯಿಸಿ ಡಿಸಿ ಕಚೇರಿ ಮುಂದು ತಾಲೂಕಿನ ಉಪ್ಪಾರಕನಹಳ್ಳಿ ರೈತರು ಬೇವಿನ ಸೊಪ್ಪು ತಿಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ
ಸಕ್ಕರೆ ನಾಡು ಎಂಬ ಹೆಸರು ಜಿಲ್ಲೆಗೆ ಇದ್ದರು ರೈತರಿಗೆ ಕಹಿ ಕೊಟ್ಟ ಜಿಲ್ಲಾಡಳಿತ ಎಂದು ವಿನೂತನ ಪ್ರೋಟೆಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ರೈತರಾದ ಶಿವಕುಮಾರ್ ಆರಾಧ್ಯ,ಹೊಸಳ್ಳಿ ಶಿವಿ,ರಾಶಿ, ವಿವೇಕ್ ಸೇರಿದಂತೆ ಹಲವರು ಇದ್ದರು
0
Report
Advertisement
ಫೇಸ್‌ಬುಕ್ ಸುಂದರಿಯ ಲಾಲಚದಲ್ಲಿ ಪూజಾರಿಯಿಂದ ಲಕ್ಷ ರೂಪಾಯಿ ಮೋಸ
Pandavapura, Karnataka:
ಫೇಸ್ಬುಕ್ ನಲ್ಲಿ ಪರಿಚಯವಾದ ಸಂದರಿ ಯುವತಿಯೊಬ್ಬಳಿಂದ ದೇಗುಲದ ಅರ್ಚಕನೋರ್ವ ಒಂದು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್
ಫೇಸ್ಬುಕ್ ಸುಂದರಿಯ ಭೇಟಿಯ ಮಾತು ನಂಬಿ ಆಕೆಗೆ ಹಂತ ಹಂತವಾಗಿ ಪೋನ್ ಪೇ ಮೂಲಕ ಸುಮಾರು 1.40 ರೂಗಳನ್ನು ಕೊಟ್ಟಿದ್ದಾನೆ. ಹಣ ಪಡೆದ ಬಳಿಕ ಆಕೆ ಈತನನ್ನು ಬ್ಲಾಕ್ ಮಾಡಿದ್ದಾಳೆ. ಯುವತಿಯಿಂದ ವಂಚನೆಗೊಳಗಾಗಿದ್ದನ್ನ ಅರಿತ ಅರ್ಚಕ ಇದೀಗ ಮಂಡ್ಯದ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
0
Report