Back
Aneelkumar Deshmukh
Followಔರಾದ್: ಪಟ್ಟಣ ಪಂಚಾಯತನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
Aurad, Karnataka:
ಜಿಲ್ಲೆಯ ಔರಾದ್ ಪಟ್ಟಣ ಪಂಚಾಯತ್ ನ ಅಧ್ಯಕ್ಷೆಯಾಗಿ ಸರುಬಾಯಿ ಘೂಳೆ, ಉಪಾಧ್ಯಕ್ಷೆಯಾಗಿ ರಾಧಾ ನರೋಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯತನ ಒಟ್ಟು 23 ಜನ ಸದಸ್ಯರ ಪೈಕಿ 15 ಜನ ಸದಸ್ಯರೊಂದಿಗಿ ಬಿಜೆಪಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಅಧಿಕಾರಕ್ಕೆರಿದ್ದಾರೆ.
1
Report
ಬೀದರ್ ಗೆ 3 ಎಫ್ ಎಂ ಚಾನೇಲ್ ಮಂಜೂರು: ಮಾಜಿ ಕೇಂದ್ರ ಸಚಿವ ಖೂಬಾ ಅಭಿನಂದನೆ
Bidar, Karnataka:
ಬೀದರ್: ಕೇಂದ್ರ ಸರ್ಕಾರ ಬೀದರ್ ಜಿಲ್ಲೆಯಲ್ಲಿ ಮೂರು ಖಾಸಗಿ ಎಫ್ ಎಂ ಚಾನೇಲ್ ಗೆ ಮಂಜೂರಾತಿ ನೀಡಿದಕ್ಕೆ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಅವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಹಿಂದಿನ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೊದನೆ ನೀಡಿರುವುದಕ್ಕೆ ಜಿಲ್ಲೆಯ ಸಮಸ್ತ ಜನತೆ ಪರ ಭಗವಂತ ಖೂಬಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
1
Report
ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಸಾವಿರಾರು ಕುರಿಗಳಿಂದ ತಹಸೀಲ್ ಗೆ ಮುತ್ತಿಗೆ
Malegaon, Karnataka:
ಬೀದರ್: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಶ್ಯೂಕೇಶನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಹುಮನಾಬಾದ್ ತಹಸೀಲ ಕಚೇರಿಗೆ ಗೊಂಡ ಸಮುದಾಯದ ಮುಖಂಡರು ಸಾವಿರಾರು ಕುರಿಗಳ ಹಿಂಡು ತಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
1
Report
ಬೀದರ್: ದಹಿ ಹಂಡಿ ಸಂಭ್ರಮ, ಕುಣಿದು ಕುಪ್ಪಳಿಸಿದ ಶಾಸಕ ಚವ್ಹಾಣ
Aurad, Karnataka:
ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದ ದಹಿ ಹಂಡಿ ಉತ್ಸವ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗವಹಿಸಿ ದಹಿ ಹಂಡಿ ಆಚರಣೆ ಹಿಂದಿನ ಇತಿಹಾಸ ಹೇಳಿದರು. ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಮಾಡುವಲ್ಲಿ ಶ್ರೀ ಕೃಷ್ಣ ವಹಿಸಿದ ಪಾತ್ರಗಳನ್ನು ಉಲ್ಲೆಖಿಸಿದರು. ಸುಮಾರು 12 ತಂಡಗಳು ದಹಿ ಹಂಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ನೇರೆದಿದ್ದ ಜನರ ಮನೋರಂಜನೆ ಮಡಿದ್ರು. ಇದೇ ವೇಳೆಯಲ್ಲಿ ಶಾಸಕ ಪ್ರಭು ಚವ್ಹಾಣ ಯುವಕರೊಂದಿಗೆ ಕುಣಿದು ಸಂಭ್ರಮಿಸಿದರು.
1
Report
ತೆರಿಗೆ ಬಾಕಿ: ಬೀದರ್ ಬ್ರೀಮ್ಸ್‌ನ ನೀರಿನ ಸಂಪರ್ಕ ಕಡಿತ
Bidar, Karnataka:
ಬೀದರ್ ನಗರಸಭೆ ಆಯುಕ್ತ ಶಿವರಾಜ್ ರಾಠೋಡ್ ಆದೇಶದಂತೆ, ಬ್ರೀಮ್ಸ್ ಆಸ್ಪತ್ರೆಯ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಆಸ್ತಿ ಮತ್ತು ನೀರಿನ ತೆರಿಗೆ ಬಾಕಿ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಲವಾರು ನೋಟಿಸ್‌ಗಳ ನಂತರವೂ ಹಣ ಪಾವತಿಸದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆ ಕಟ್ಟಡಕ್ಕೆ ನೀರು ಸರಬರಾಜು ಮುಂದುವರಿಸಲಾಗಿದೆ. ವಸತಿಗೃಹಗಳು ಮತ್ತು ಹಾಸ್ಟೆಲ್‌ಗಳಿಗೆ ಮಾತ್ರ ನೀರು ಸರಬರಾಜು ನಿಲ್ಲಿಸಲಾಗಿದೆ. ಬ್ರೀಮ್ಸ್ 8 ಕೋಟಿಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
1
Report