Back
Dakshina Kannada575005blurImage

ಸರ್ಕಾರದಿಂದ ಗೊಂದಲ: ಶಾಸಕ ವೇದವ್ಯಾಸ ಕಾಮತ್ ಕಿಡಿ

Shamsheer
Sept 07, 2024 05:53:57
Mangaluru, Karnataka
ಗಣೇಶೋತ್ಸವವದ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರಿ ಹಿಂದೂಗಳಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಲ್ಲಿ ‌ಮಾತನಾಡಿದ ಅವರು, ಗಣೇಶೋತ್ಸವಕ್ಕೆ ಅನುಮತಿ ಬೇಕಾದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ ಹೆಸರು ಕೊಡಿ, ಅವರ ಮೊಬೈಲ್ ಸಂಖ್ಯೆ ಕೊಡಿ, ವಿಳಾಸ ಕೊಡಿ, ಟ್ಯಾಬ್ಲೋ ಎಷ್ಟು ಇರುತ್ತದೆ, ಎಲ್ಲಿಂದ ಬರುತ್ತದೆ, ಯಾವ ವಾಹನದಲ್ಲಿ ಬರುತ್ತದೆ, ಅದರ ದಾಖಲೆ ಕೊಡಿ, ಎಷ್ಟು ಜನ ಬರುತ್ತಾರೆ, ಎಂದೆಲ್ಲ ತೊಂದರೆ ಕೊಟ್ಟರೆ ಯಾವ ಹಬ್ಬ ತಾನೇ ಸಂಭ್ರಮದಿಂದ ಆಚರಿಸಲು ಸಾಧ್ಯ? ಎಂದಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com