Back
Dakshina Kannada575001blurImage

2025–26ನೇ ಸಾಲಿನ ಪದಗ್ರಹಣ ಸಮಾರಂಭ ಪ್ರಶಸ್ತಿ ಪ್ರದಾನ ಸಮಾರಂಭ

Shamsheer
Jun 04, 2025 13:18:49
Mangaluru, Karnataka
ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರ RSAMDIO ( ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್‌ಫಾ ರ್ಮೇಶನ್ ಆರ್ಗನೈಸೇಷನ)2025–26ನೇ ಸಾಲಿನ ಪದಗ್ರಹಣ ಸಮಾರಂಭ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಆವತಾರ್ ಹೋಟೆಲ್‌ನಲ್ಲಿ ಜೂನ್ 7 ಮತ್ತು 8 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿದೆ. ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಪಿಡಿಜಿ ಎಂಡಿ ಡಾ. ಬಿ. ದೇವದಾಸ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ 3 ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿ ಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ರೋಟರಿ ಇಂಟರ್‌ ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮದತ್ತ ಅವರು ಭಾಗವಹಿಸಲಿ ದ್ದಾರೆ ಎಂದವರು ತಿಳಿಸಿದ್ದಾರೆ.
0
Report

For breaking news and live news updates, like us on Facebook or follow us on Twitter and YouTube . Read more on Latest News on Pinewz.com